
Bahumuki (Kannada Edition)
Failed to add items
Add to Cart failed.
Add to Wish List failed.
Remove from wishlist failed.
Adding to library failed
Follow podcast failed
Unfollow podcast failed

Get 2 free audiobooks during trial.
Buy for $6.27
No default payment method selected.
We are sorry. We are not allowed to sell this product with the selected payment method
-
Narrated by:
-
Multiple
-
By:
-
Vivek Shanbhag
About this listen
'ಬಹುಮುಖಿ' ವಿವೇಕ ಶಾನಭಾಗ ಅವರ ನಾಟಕಕೃತಿ. ಅಕ್ಷರ ಪ್ರಕಾಶನದಿಂದ 2008ರಲ್ಲಿ ಪ್ರಕಟಗೊಂಡ ಈ ಕೃತಿ 2020ರಲ್ಲಿ ಮತ್ತೆ ಮರುಮುದ್ರಣಗೊಂಡಿದೆ. ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವರ ಜೀವನದೊಳಕ್ಕೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಧಾವಿಸಿ ಬಿದ್ದು ಉರಿದು ಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.
ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುತ್ತಿರುವ ಮಾಧ್ಯಮಗಳು, ಅವು ಹುಟ್ಟಿಸಿದ ಭ್ರಮಾಲೋಕದಲ್ಲಿ ತಾಳತಪ್ಪಿದ ಸಂಬಂಧಗಳು, ಇತಿಹಾಸ-ಕಥನ-ನೆನಪುಗಳನ್ನು ಕುಶಲ ಕುತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಶಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕವಿದೆ.
Please Note: This audiobook is in Kannada.
©2022 Storyside IN (P)2022 Storyside IN