• A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

  • Jul 7 2022
  • Length: 1 hr and 10 mins
  • Podcast

A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

  • Summary

  • ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ.Changemaker, activist and civic leader Kathyayini Chamaraj talks to host Pavan Srinath about the need for true local and city democracy, and lays out what Bengaluru’s citizens should ask of their local corporator candidates in the upcoming 2022 BBMP elections.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!'ನಾಗರಿಕ' ಎಂಬ ಪದವು 'ನಗರ'ಕ್ಕೆ ಸಂಭಂದ ಪಟ್ಟದ್ದು, ಇಂಗ್ಲಿಷ್ ನಲ್ಲೂ ಮತ್ತು ಕನ್ನಡದಲ್ಲೂ. ನಮ್ಮಲ್ಲಿ ಅನೇಕರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ ಮತ್ತು ಮತದಾನ ಮಾಡುತ್ತೇವೆ. ಆದರೆ ಇದರಲ್ಲಿ ಕೆಲವೇ ಕೆಲವು ಜನರು ಮಾತ್ರ ನಗರ ಮತ್ತು ಸ್ಥಳೀಯ ಚುನಾವಣೆಗಳ ಬಗ್ಗೆಯೂ ಗಮನಹರಿಸುತ್ತಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ನಗರ ಚುನಾವಣೆಗಳಲ್ಲಿ ಮತದಾರರ ಜಾಗೃತಿ ಮತ್ತು ಇದರಿಂದಾಗಿ ಮತದಾನ ಮಾಡುವವರ ಸಂಖ್ಯೆ ಎರಡೂ ಕಡಿಮೆ ಇರುತ್ತೆ. ರಾಜ್ಯ ಸರ್ಕಾರಗಳು ಹೆಚ್ಚಿನ ಸ್ಥಳೀಯ ನಿರ್ಧಾರಗಳ ಮೇಲೆ ಅತಿಯಾದ ನಿಯಂತ್ರಣವನ್ನು ಹೊಂದಿದ್ದು ಇದರ ಪರಿಣಾಮವಾಗಿ ಬೆಂಗಳೂರಿನ ಬಿಬಿಎಂಪಿ ಚುನಾವಣೆ 2 ವರ್ಷದಿಂದ ನಡೆದಿಲ್ಲ. ಈವಾಗ ಅಂತಿಮವಾಗಿ ಜುಲೈ 2022 ರಲ್ಲಿ ಚುನಾವಣಾ ದಿನಾಂಕವನ್ನ ನಾವು ನಿರೀಕ್ಷಿಸುತ್ತಿದ್ದೇವೆ.ಕಾತ್ಯಾಯಿನಿ ಚಾಮರಾಜ್ ಅವರು ಸುಮಾರು 35 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿ ಮತ್ತು ನಗರ ಆಡಳಿತದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ ಮತ್ತು ಅದರ ಕುರಿತು ಕೆಲಸ ಮಾಡುತ್ತಿದ್ದಾರೆ. 2005 ರಿಂದ CIVIC ನ ಕಾರ್ಯನಿರ್ವಾಹಕ ಟ್ರಸ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 'ನಾಗರಿಕ ಸಮಾಜ ವೇದಿಕೆ'ಯ ನೇತ್ರತ್ವದಲ್ಲಿ ಕಾತ್ಯಾಯಿನಿ ಮತ್ತು ಅವರ ಸಂಗಡಿಗರು ಸೇರಿ 'BBMP ಚುನಾವಣೆ 2022 ರ ಪ್ರಣಾಳಿಕೆ'ಯನ್ನು ತಯಾರಿಸಿದ್ದು, ಇದನ್ನು ಜೂನ್‌ನಲ್ಲಿ ನಗರ ಮತ್ತು ಕರ್ನಾಟಕ ರಾಜ್ಯದ ಪ್ರಮುಖ ರಾಜಕೀಯ ನಾಯಕರನ್ನು ಒಳಗೊಂಡ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಯಿತು. ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 143 ನೇ ಸಂಚಿಕೆಯಲ್ಲಿ ಕಾತ್ಯಾಯಿನಿಯವರು ಹೇಗೆ ಪ್ರಜಾಪ್ರಭುತ್ವವು ಚುನಾವಣೆಗಳೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು, ಜೊತೆಗೆ ಜವಾಬ್ದಾರಿಗಳು, ಹೊಣೆಗಾರಿಕೆ ಮತ್ತು ಪಾರದರ್ಶಕತೆಯೊಂದಿಗೆ ನಡೆಯಬೇಕಾದ ಸಕ್ರಿಯ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳ ಅಗತ್ಯತೆಗಳ ಕುರಿತೂ ತಿಳಿಸುತ್ತಾರೆ. ಅದರ ಜೊತೆಗೆ ಆಡಳಿತ ಅವಧಿಯಲ್ಲಿ ಹೇಗೆ ಊರಿನ ತಳಮಟ್ಟದ ನಾಗರಿಕರಿಗೂ ಕೂಡ ಅವರಿಗೆ ಅರ್ಹವಾದ ಸವಲತ್ತುಗಳು ...
    Show more Show less
activate_Holiday_promo_in_buybox_DT_T2

What listeners say about A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

Average customer ratings

Reviews - Please select the tabs below to change the source of reviews.